ಮಂಗಳೂರು: ನಗರದಲ್ಲಿ 3 ಕೋ ಟಿ ರೂ . ವೆಚ್ಚ ದಲ್ಲಿ ವಿವಿಧ ಅಭಿವೃದ್ಧಿ ಕಾಮಗಾ ರಿಗಳು ಆರಂಭವಾ ಗಿವೆ. 2024-25ರ ವೇಳೆಗೆ ಮಂಗಳೂರಿನ ಚಿತ್ರಣವೇ ಸಂಪೂರ್ಣ ಬದಲಾಗಿ ಸ್ಮಾರ್ಟ್ ನಗರ ನಿರ್ಮಾಣ ವಾಗಲಿದೆ. ಆ ಮೂಲಕ ನರೇಂದ್ರ ಮೋದಿಯವರ ಕಸನು , ಕಲ್ಪನೆ ಸಾಕಾರಗೊಳ್ಳಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು .
ನಗರದ ಕು ದ್ಮು ಲ್ ರಂ ಗರಾ ವ್ ಪು ರಭವನದಲ್ಲಿ ಆಯೋ ಜಿಸಲಾ ದ ಮಂ ಗಳೂ ರು ಸ್ಮಾರ್ಟ್ ಸಿಟಿ ವತಿಯಿಂದ ನಗರದಲ್ಲಿ ಕೈಗೊಳ್ಳಲಾಗುವ 90 ಕೋಟಿ ರೂ . ವೆಚ್ಚದ ಎರಡು ಕಾಮಗಾರಿಯ ಶಿಲಾನ್ಯಾಸ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಅಮೃತ್ ಯೋಜನೆ, ಸ್ಮಾರ್ಟ್ ಸಿಟಿ, 792 ಕೋಟಿ ರೂ .ಮೊತ್ತದ ಜಲಸಿರಿ ಯೋಜನೆ, ಗ್ಯಾಸ್ ಪೈಪ್ ಲೈನ್, ಎಡಿಬಿ ಯೋಜನೆಯಡಿ ಒಳಚರಂಡಿ ಕಾಮಗಾರಿ ಅನುಷ್ಠಾನಗೊಳ್ಳುತ್ತಿದ್ದು, ರಾಜ್ಯದ ಇತರ ನಗರಗಳಿಗೆ ಹೋಲಿಸಿದರೆ ಅತಿ ಹೆಚ್ಚಿನ ಅನುದಾನ ಮಂಗಳೂರಿಗೆ ಬಂದಿದೆ. ಅದರ ಶೇ .100ರಷ್ಟು ಯಶಸ್ವಿ ಅನುಷ್ಠಾನದ ಮೂಲಕ ಅಭಿವೃದ್ಧಿಗೆ ಪೂರಕವಾ ಗಿ ಬದಲಾವಣೆ ಮಾಡಲಾಗುತ್ತಿದೆ ಎಂದರ .
ಅಧ್ಯಕ್ಷತೆ ವಹಿಸಿದ್ದ ಮೇಯರ್ ಪ್ರೇಮಾನಂದ ಶೆಟ್ಟಿ, ಯಡಿಯೂ ರಪ್ಪ ಅವರ ಮೊದಲ ಅವಧಿಯ ಸರ್ಕಾರ ಇದ್ದಾಗ ನಗರಕ್ಕೆ 100 ಕೋ ಟಿ ರೂ . ನಗರೋತ್ಥಾನ ಅನುದಾನ ಲಭಿಸುವ ಮೂಲಕ ನಗರದ ಅಭಿವೃದ್ಧಿಗೆ ಚಾಲನೆ ಸಿಕ್ಕಿತ್ತು . ಸ್ಮಾರ್ಟ್ ಸಿಟಿ ಯೋಜನೆಯಡಿ ಮತ್ತೆ ಅಭಿವೃದ್ಧಿ ಪರ್ವ ಆರಂಭವಾಗಿದ್ದು , ಜನರ ಸಹಭಾ ಗಿತ್ವದಲ್ಲಿ ಕಾಮಗಾರಿ ಕೈ ಗೆತ್ತಿಕೊಳ್ಳಲಾಗುತ್ತಿದೆ ಎಂದರು .
ಕನ್ಸಲ್ಟೆಂಟ್ ಆರ್ಕಿಟೆಕ್ಟ್ನೆಲ್ಸನ್ ಪಾಸ್ ಮತ್ತು ಕುಮಾರಚಂದ್ರ ಯೋಜನೆ ಕುರಿತಂತೆ ಮಾ ಹಿತಿ ನೀ ಡಿದರು .
ಪಾಲಿಕೆ ಮು ಖ್ಯಸಚೇ ತಕ ಸುಧೀರ್ ಶೆಟ್ಟಿ ಕಣ್ಣೂರು , ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾ ರ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಪಾಲಿಕೆ ಸದಸ್ಯರಾದ ಪೂರ್ಣಿಮಾ, ಲೋಹಿತ್ ಅಮೀನ್, ದಿವಾಕರ್, ಲೋಕೇಶ್ ಬೊಳ್ಳಾಜೆ, ಸಂದೀಪ್ ಗರೋಡಿ, ಆಯುಕ್ತ ಅಕ್ಷಿ ಶ್ರೀಧರ್, ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಸ್ಮಾರ್ಟ್ ಸಿಟಿ ಮ್ಯಾನೇಜರ್ ಅರುಣ್ ಪ್ರಭಾ ಉಪಸ್ಥಿತರಿದ್ದರು .
Read more at: https://www.vijayavani.net/modi-smart-city-dream-in-mangaluru/
0 Comments